Tumgik
satwadharanews-blog · 6 years
Text
ಗೋಕರ್ಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಪನ್ನ
ಹಿರೇಗುತ್ತಿ ಹೈಸ್ಕೂಲ್ ಪ್ರತಿಭಾಕಾರಂಜಿಯಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆ
ಕುಮಟಾ: ಗೋಕರ್ಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಸರಕಾರಿ ಪ್ರೌಢಶಾಲೆ ನಾಡುಮಾಸ್ಕೇರಿಯಲ್ಲಿ ನಡೆಯಿತು.
ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿದ್ಯಾರ್ಥಿಗಳು ನಾಡುಮಾಸ್ಕೇರಿ ಹೈಸ್ಕೂಲಿನಲ್ಲಿ ನಡೆದ ಗೋಕರ್ಣ ವಲಯ ಮಟ್ಟದ ಪ್ರತಿಭಾಕಾರಂಜಿಯಲ್ಲಿ ನಡೆದ ಚರ್ಚಾಸ್ಪರ್ಧೆ,ಆಶುಭಾಷಣ ಸ್ಪರ್ಧೆ, ಇಂಗ್ಲೀಷ ಭಾಷಣ ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿ ವೆಂಕಟೇಶ ಜೆ.ಪಟಗಾರ ಪ್ರಥಮ ಸ್ಥಾನ ರಂಗೋಲಿ ಸ್ಪರ್ಧೆಯಲ್ಲಿ ಶಶಿ ಪಟಗಾರ ಪ್ರಥಮಸ್ಥಾನ, ಸಂಸ್ಕøತ ಭಾಷಣದಲ್ಲಿ ಶ್ರೀದೇವಿ ಹಳ್ಳೇರ ಪ್ರಥಮ ಸ್ಥಾನ ಪಡೆದು…
View On WordPress
0 notes
satwadharanews-blog · 6 years
Text
18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಪದಕಗಳ ಬೇಟೆ.
ಜಕಾರ್ತ: 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದೆ. ವಿವಿಧ ವಿಭಾಗಗಳಲ್ಲಿ ಇಂದು ಕೂಡ ಭಾರತದ ಅಥ್ಲೇಟ್ ಗಳು ತಮ್ಮ ಸಾಮರ್ಥ್ಯ ತೋರಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ ವಿಭಾಗದ 4×400 ರಿಲೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ನಮ್ಮ ಕನ್ನಡತಿ ಪೂವಮ್ಮ, ಹಿಮಾದಾಸ್, ಎಸ್ಎಲ್ ಗಾಯಕ್ವಾಡ್ ಹಾಗೂ ವಿ ಕೊರೊತಾ ಕೇವಲ 3:28:72 ನಿಮಿಷದಲ್ಲಿ ಮಿಂಚಿನ ಓಟ ಓಡಿ ಸತತ ಐದನೇ ಸಲ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.
ಪುರುಷರ 4×400 ರಿಲೆಯಲ್ಲಿ…
View On WordPress
0 notes
satwadharanews-blog · 6 years
Text
ಮತ್ತೊಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರು ಮೀಸಲಾತಿ ಪಡೆಯುವಂತಿಲ್ಲ: ಸುಪ್ರೀಂ ಆದೇಶ
ನವದೆಹಲಿ: ಇಂದು ಸುಪ್ರೀಂ ಕೋರ್ಟ್ ಒಂದು ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ಎಸ್’ಸಿ/ಎಸ್’ಟಿ)ದ ಸದಸ್ಯರು ಮತ್ತೊಂದು ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆಯುವಂತಿಲ್ಲ ಎಂದು ಹೇಳಿದೆ.
ಶಿಕ್ಷಣ ಮತ್ತು ಉದ್ಯೋಗ ಕ್ಕಾಗಿ ಇನ್ನೊಂದು ರಾಜ್ಯಕ್ಕೆ ಹೋಗುವ ಎಸ್ಸಿ/ಎಸ್ಟಿ ಸದಸ್ಯರು ಆ ರಾಜ್ಯದಲ್ಲಿ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹತೆ ಪಡೆದಿಲ್ಲವೆಂದು ಎಂದು ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಸಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.
ಒಂದು ರಾಜ್ಯದಲ್ಲಿ ಪರಿಶಿಷ್ಟ…
View On WordPress
0 notes
satwadharanews-blog · 6 years
Text
ತೆಂಗಿನ ಮರ ಏರಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ : ಕುಮಟಾದ ಹಿರೇಗುತ್ತಿಯ ವ್ಯಕ್ತಿ ಸಾವು.
ಕುಮಟಾ: ಮನೆಯಲ್ಲಿ ಹಾಗೂ ಹಳ್ಳ ಕೊಳ್ಳಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ತೆಂಗಿನ ಮರವೇರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು, ರವಿ ಯಶವಂತ ಹಳ್ಳೇರ ಎಂಬ ವ್ಯಕ್ತಿ ತೆಂಗಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಮೂಲತಃ ಕುಮಟಾ ತಾಲೂಕಿನ ಹಿರೇಗುತ್ತಿ ಗ್ರಾಮದವನೆಂದು ಈತನನ್ನು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ…
View On WordPress
0 notes
satwadharanews-blog · 6 years
Text
ಮುರುಡೇಶ್ವರದಲ್ಲಿ ಗಮನ ಸೆಳೆಯುತ್ತಿದೆ ಪುಷ್ಕರಣಿ: ತಂದೆಗೆ ನೀಡಿದ ಉಡುಗೊರೆ ಈಗ ಜನತೆಯ ಕೇಂದ್ರಬಿಂದು.
ಮುರುಡೇಶ್ವರದಲ್ಲಿ ಗಮನ ಸೆಳೆಯುತ್ತಿದೆ ಪುಷ್ಕರಣಿ: ತಂದೆಗೆ ನೀಡಿದ ಉಡುಗೊರೆ ಈಗ ಜನತೆಯ ಕೇಂದ್ರ ಬಿಂದು.
ಭಟ್ಕಳ: ಮುರುಡೇಶ್ವರದ ನಿರ್ಮಾತ ಆರ್.ಎನ್.ಶೆಟ್ಟಿಯವರು ಮುಂಬರುವ 91ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್.ಎನ್.ಶೆಟ್ಟಿಯವರು ಧಾರ್ಮಿಕ ಮತ್ತು ಪರೋಪಕಾರಿ ವ್ಯಕ್ತಿ. ಶಿವನ ಭಕ್ತರಾಗಿರುವ ಅವರು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಮುರುಡೇಶ್ವರ ದೇವಾಲಯವನ್ನು ಮರುನಿರ್ಮಾಣ ಮಾಡಿ ನವೀಕರಿಸಿದ್ದರು. ದೇವಸ್ಥಾನದಲ್ಲಿರುವ ೨೪೯ ಅಡಿ ಎತ್ತರದ ರಾಜ ಗೋಪುರ ವಿಶ್ವದ ಅತಿ ಎತ್ತರದ ಗೋಪುರ ಎಂದು ಪರಿಗಣಿಸಲಾಗಿದೆ. ಅರಬ್ಬಿ ಸಮುದ್ರದ ತೀರದಲ್ಲಿ ಗುಡ್ಡದ ಮೇಲೆ ಸ್ಥಾಪಿಸಲಾಗಿರುವ ೧೨೩ ಅಡಿ…
View On WordPress
0 notes
satwadharanews-blog · 6 years
Text
ಕೆಮ್ಮು ಮತ್ತು ನೆಗಡಿ ನಿವಾರಣೆಗೆ ಇಲ್ಲಿದೇ..... ಮನೆ ಮದ್ದು!
ಕೆಮ್ಮು ಮತ್ತು ನೆಗಡಿ ನಿವಾರಣೆಗೆ: ಮನೆ ಮದ್ದು.
ಆಹಾರದಲ್ಲಿ ಹೆಚ್ಚು ಶುಂಠಿ ಹಾಗೂ ಮೆಣಸು ಬಳಸಿ. ನಿತ್ಯ ಕುಡಿಯುವ ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ನೈಸರ್ಗಿಕವಾಗಿ ದೇಹದ ಉಷ್ಣತೆ ಪ್ರಮಾಣ ಹೆಚ್ಚಿಸುವ ಕಷಾಯ, ಸೂಪ್ ಕುಡಿಯಿರಿ. ಸ್ನಾನ ಮಾಡುವಾಗ ಕೂಡ ಒಂದೆರಡು ಹನಿ ನೀಲಗಿರಿ ತೈಲವನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.
• ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು 1 ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ,…
View On WordPress
0 notes
satwadharanews-blog · 6 years
Text
NIAಯಿಂದ ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್ ಮಗ ಅರೆಸ್ಟ್.
ಶ್ರೀನಗರ : ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂದು ಬೆಳಗ್ಗೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ನ ಮಗ ಶಕೀಲ್ ನನ್ನು ನಿವಾಸದಲ್ಲಿ ಬಂಧಿಸಿದೆ ಎಂದು ವರದಿ ಮೂಲಗಳಿಂದ ತಿಳಿದುಬಂದಿದೆ.
ಸಂವಿಧಾನದ 35ಎ ವಿಧಿಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿರುವುದರ ವಿರುದ್ಧ ಕಾಶ್ಮೀರದ ಪ್ರತ್ಯೇಕತಾವಾದಿಗಳು ಬಂದ್ ಕರೆ ನೀಡಿದೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆಗಳನ್ನು ತಡೆಯಲು ನಿರ್ಬಂಧಕಾಜ್ಞೆ ವಿಧಿಸಲಾಗಿದೆ.…
View On WordPress
0 notes
satwadharanews-blog · 6 years
Text
ಹೊನ್ನಾವರ ಎಸ್.ಡಿ.ಎಂ ಕಾಲೇಜಿನಲ್ಲಿ‌ ನಡೆಯಿತು ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮ.
ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ಎಂ.ಪಿ,ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ, ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ ಯಶಸ್ಸು ಎಂಬ ಶೀರ್ಷಿಕೆಯೊಂದಿಗೆ ವ್ಯಕ್ತಿತ್ವ ವಿಕಸನ ಉಪನ್ಯಾಸ ನಡೆಯಿತು.
ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಇವರು ಉಪನ್ಯಾಸ ನೀಡುತ್ತ ವ್ಯಕ್ತಿತ್ವಕ್ಕೆ ಶೋಭೆ ಮೌಲ್ಯಗಳಿಂದ ಸಾಧ್ಯ ಮೋಹವನ್ನು ತ್ಯಜಿಸಿ ಜೀವÀನದಲ್ಲಿ ಶಿಸ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕಿದೆ ಆಗ ನೆಮ್ಮದಿ ಸಿಗಲು ಸಾಧ್ಯ ಎಂದರು.…
View On WordPress
0 notes
satwadharanews-blog · 6 years
Text
ಶ್ರೀರಾಮನ ಸಮದೃಷ್ಟಿಯ ಬಗ್ಗೆ ಶ್ರೀಧರ ಸ್ವಾಮಿಗಳು ಹೇಳಿದ್ದ ಮಾತುಗಳು.
(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಶ್ರೀರಾಮನು ವನಕ್ಕೆ ಹೋಗುವನೆಂದು ತಿಳಿದ ನಂತರ ‘ಆರ್ತ ಮಹಾನ್ ಜಜ್ಞೇ’. ಅರಮನೆಯ ಅಂತಃಪುರದಲ್ಲಿ ದೊಡ್ಡ ಹಾಹಾಕಾರವಾಯಿತು. ಆ ದುಃಖದಲ್ಲಿ ರಾಮನ ತಾಯಂದಿರ ಮುಖದಿಂದ ಹೊರಟ ಶಬ್ದಗಳಿವು.
ಕೌಸಲ್ಯಾಯಾಂ ಯಥಾ ಯುಕ್ತೋ ಜನನ್ಯಾಂ ವರ್ತತೇ ಸದಾ| ತಥೈವ ವರ್ತತೇಽಸ್ಮಾಸು ಜನ್ಮಪ್ರಭತಿ ರಾಘವಃ| ನ ಕ್ರುದ್ಧ್ಯತ್ಯಭಿಪ್ತೋಽಪಿ ಕ್ರೋಧನೀಯಾನಿ ವರ್ಜಯನ್| ಕ್ರುದ್ಧಾನ್ಸ್ರ ಸಾದಯನ್ ಸರ್ವಾನ್ ಸ ಇತೋಽದ್ಯ ಪ್ರವತ್ಸ್ಯತಿ||
‘ಶ್ರೀರಾಮನು ಕೌಸಲ್ಯೆಯ…
View On WordPress
0 notes
satwadharanews-blog · 6 years
Text
ಮಂಡ್ಯದಲ್ಲಿ ಭತ್ತ ನಾಟಿ ಮಾಡಿದ ಸಿಎಂ: ತಿಂಗಳಲ್ಲಿ ಒಂದು ದಿನ ರೈತರ ಜೊತೆ ಕೃಷಿ ಚಟುವಟಿಕೆಯಲ್ಲಿ ಭಾಗಯಾಗ್ತೀನಿ ಎಂದ್ರು
ಮಂಡ್ಯ : ಭತ್ತ ನಾಟಿ ಮಾಡಲು ಸೀತಾಪುರಕ್ಕೆ ಆಗಮಿಸಿ ಅರಳುಕುಪ್ಪೆಯ ಜಮೀನಿನಲ್ಲಿ ಭತ್ತ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ವರುಣ ಸ್ವಾಗತ ಕೋರಿದ್ದಾನೆ.
ಕೆಂಚೇಗೌಡರ ಕುಟುಂಬಕ್ಕೆ ಸೇರಿದ ಐದು ಎಕರೆ ಜಮೀನಿನಲ್ಲಿ ನಡೆದ ಭತ್ತದ ನಾಟಿಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. 150 ಜನ ರೈತ ಮಹಿಳೆಯರು, 50 ಜನ ರೈತರು ನಾಟಿ ಮಾಡಿದರು. ನಾಟಿ ವೇಳೆ ಪಾಂಡವಪುರ ತಾಲೂಕಿನ ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡ ತಂಡದಿಂದ ಸೋಬಾನೆ ಪದ ಗಾಯನ ನಡೆಯಿತು.
ನಂತರ ಮಾತನಾಡಿದ ಸಿಎಂ, ನನ್ನ ರೈತ ಬಂಧುಗಳಿಗೆ…

ಯಲ್ಲಾಪುರದ ಸಮೀಪ‌ ಸಂಭವಿಸಿತು ಭಾರೀ ಅಪಘಾತ:ಓರ್ವನ ಸಾವು, ಬಸ್ ನಲ್ಲಿದ್ದ ಅನೇಕರಿಗೆ ಗಾಯ!
ಯಲ್ಲಾಪುರ: ಬಸ್ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿ ಕ್ಯಾಂಟರ್ ಚಾಲಕ ಸ್ಥಳದಲ್ಲಿಯೇ ಸಾವನಫ್ಪಿ 15 ಜನ‌ಬಸ್ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದ ಮೇಲೆ ಸಂಭವಿಸಿದೆ.
ಮೃತ ಕ್ಯಾಂಟರ್ ಚಾಲಕನ‌ ಗುರುತು ಪತ್ತೆಯಾಗಿಲ್ಲ. ಹುಬ್ಬಳ್ಳಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಎದುರಿನಿಂದ ತೆರಳುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಿಕೊಂಡ ಬಂದ ಕ್ಯಾಂಟರ ಚಾಲಕ ಬಸ್‌ಗೆ ಅಪಘಾತಪಡಿಸಿದ್ದಾನೆ ಎನ್ನಲಾಗಿದೆ. ಬಸ್ ಪ್ರಯಾಣಿರಾದ ಲಕ್ಮನ (26)…

ಭೀಮನ ಅಮಾವಾಸ್ಯೆ ವ್ರತದ ಮಹತ್ವ ಏನು ಗೊತ್ತಾ? ವ್ರತಾಚರಣೆ ಹೇಗೆ ಗೊತ್ತಾ?
ಪತಿಗೆ ಆಯಸ್ಸು ಆರೋಗ್ಯ, ಅಭಿವೃದ್ಧಿ ನೀಡಲೆಂದು ಬೇಡಿಕೊಂಡು ದೀರ್ಘಕಾಲ ಸುಮಂಗಲಿಯಾಗಿರುವಂತೆ ಹರಸಲು ಬೇಡುವ ಹಬ್ಬವೇ ಭೀಮನ ಅಮವಾಸ್ಯೆ, ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕೂಡ ಕರೆಯುತ್ತಾರೆ. ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

ಮನೆಯಲ್ಲೆ ಮಾಡಬಹುದಾದ ಪಿಜ್ಜಾ.
ಬೇಕಾಗುವ ವಸ್ತುಗಳು
ಮೈದಾಹಿಟ್ಟು—–250 ಗ್ರಾಮ್ ಯೀಸ್ಟ್————1 ಟಿ ಚಮಚ ಸಕ್ಕರೆ———1 ಟಿ ಚಮಚ ಆಲಿವ್ ಎಣ್ಣೆ——-2 ಟಿ ಚಮಚ ದೊಣ್ಣೆಮೆಣಸು(ಡೊಡ್ದ ಮೆಣಸು)—-2 ನೀರುಳ್ಳಿ——————-1 ಅಣಬೆ——–100 ಗ್ರಾಮ್ಸ್ ಕೋಳಿ (ಮೂಳೆ ತೆಗೆದ)——–100ಗ್ರಾಮ್ಸ್ (ಸಸ್ಯಾಹಾರಿಗಳು ಇದನ್ನು ಹಾಕದಿದ್ದರೆ ಆಯಿತು) ಗಿಣ್ಣು (ಚೀಸ್)—————– 25 ಗ್ರಾಮ್ಸ್ ಟೊಮೆಟೊ ಸಾಸ್ ಪಿಜ್ಜಾ ಸಿಂಗರಿಸಲು (ಸಿಸನಿಂಗ್)
ಮಾಡುವ ಬಗೆ
ಮೊದಲು ಮೈದಾ ಹಿಟ್ಟನ್ನು ಜರಡಿ ಹಿಡಿದುಕೊಳ್ಳಬೇಕು. ಯೀಸ್ಟ್ ಮತ್ತು ಸಕ್ಕರೆಯನ್ನು ಉಗುರು…
View On WordPress
0 notes
satwadharanews-blog · 6 years
Text
ಶ್ರೀ ನಂದಿಕೇಶ್ವರ ಗ್ರಾಮ ಅರಣ್ಯ ಸಮಿತಿ ಬಂಗಣೆಯಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ.
ಕುಮಟಾ: ಶ್ರೀ ನಂದಿಕೇಶ್ವರ ಗ್ರಾಮ ಅರಣ್ಯ ಸಮಿತಿ ಬಂಗಣೆಯಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಶ್ರೀ ಪ್ರವೀಣಕುಮಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕುಮಟಾ ಉಪವಿಭಾಗ ಕುಮಟಾರವರು ಕಾರ್ಯಕ್ರಮವನ್ನು ದೀಪ ಬೆಳೆಗಿಸುವುದರೊಂದಿಗೆ ಉದ್ಘಾಟಿಸಿ ಹಾಗೂ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿ ಇಂದಿನ ಮಕ್ಕಳು ನಾಳಿನ ಪ್ರಜೆಗಳು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಅರಣ್ಯ ಹಾಗೂ ಪರಿಸರದ ಕುರಿತು…
View On WordPress
0 notes