Tumgik
#rawgranules eathealthylivehealthy healthyproducts naturalproducts tendermangopickle APPEMIDIeathealthy healthyfood healthylifestyle eatclean
rawgranules · 2 years
Photo
Tumblr media
ಮಿಡಿ ಮಾವಿನಕಾಯಿ ಉಪ್ಪಿನಕಾಯಿ ನೋಡಿದರೆ ಯಾರ ಬಾಯಿಯಲ್ಲಿ ನೀರೂರಲ್ಲ ಹೇಳಿ? ಉಪ್ಪಿನಕಾಯಿ ತನ್ನ ಸ್ವಾದ,ಸೊಗಸು,ವಾಸನೆಯಿಂದ ಜನರನ್ನು ಸೆಳೆಯುತ್ತದೆ.ಇಂಥ ಉಪ್ಪಿನಕಾಯಿ ಪ್ರಭೇದಗಳಲ್ಲಿ ಮಿಡಿಮಾವು, ಅಪ್ಪೆಮಿಡಿ ಎನ್ನುವ ವಿಶಿಷ್ಟ ಪ್ರಭೇದವೊಂದಿದೆ.ಮಿಡಿ ಮಾವಿನಕಾಯಿಯನ್ನು ತಂದು ಅದರಿಂದ ಉಪ್ಪಿನಕಾಯಿ ಮಾಡಿ ಡಬ್ಬದಲ್ಲಿಟ್ಟರೆ ವರ್ಷದವರೆಗೆ ಇಡಬಹುದು. ಇದನ್ನು ಮಲೆನಾಡು ಭಾಗ ಬಿಟ್ಟರೆ ಬೇರೆಕಡೆ ತಯಾರಿಸುವುದು ಅಪರೂಪ.ಆದರೆ ಮಿಡಿಉಪ್ಪಿನ ಕಾಯಿ, ಅಪ್ಪೆಮಿಡಿ ಎಂದರೆ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಮಿಡಿಮಾವು ಅಥವಾ ಅಪ್ಪೆಮಿಡಿ ತಯಾರಿಸಲು ಎಲ್ಲಾ ಮಾವಿನ ಕಾಯಿಗಳಿಂದ ಸಾಧ್ಯವಿಲ್ಲ. ವಿಶಿಷ್ಟ ಸೊನೆಯ ಹುಳಿಮಾವಿನ ಎಳೆಮಿಡಿಗಳನ್ನು ಬಲಿಯುವ ಮೊದಲೇ ಕೊಯ್ದು ತಿಂಗಳುಗಟ್ಟಲೆ ಉಪ್ಪಿನಲ್ಲಿ ನೆನೆಸಿಟ್ಟಾಗ, ಒಂದೆರಡು ತಿಂಗಳುಗಳಲ್ಲಿ ಎಳೆಯ ಮಾವಿನ ಮಿಡಿಗಳು ತುಸು ಸಣ್ಣದಾಗಿ ಕುಗ್ಗಿಕೊಂಡಿರುತ್ತವೆ.ಈ ಮಿಡಿಮಾವು ತಯಾರಿಕೆ ಮಲೆನಾಡು, ಕರಾವಳಿಗಳಲ್ಲಿ ಬಲುಪ್ರಸಿದ್ಧ.ಇನ್ನು ಬೇಸಿಗೆಯ ದಿನಗಳಲ್ಲಿ, ಹೆಚ್ಚಿನ ಜನರು ಇಡೀ ವರ್ಷಕ್ಕೆ ಸಾಕಾಗುವಷ್ಟು ಉಪ್ಪಿನಕಾಯಿ ತಯಾರಿಸುತ್ತಾರೆ. ಉತ್ತರ ಕನ್ನಡ,ಶಿವಮೊಗ್ಗ ಸೇರಿದ ಮಲೆನಾಡು, ಕರಾವಳಿ ಭಾಗಗಳ ನದಿತೊಪ್ಪಲಿನಲ್ಲಿ ದೊರೆಯುವ ಈ ಮಾವಿನ ಮಿಡಿಗಳನ್ನು ಸಂಗ್ರಹಿಸಿ ಅಪ್ಪೆಮಿಡಿ ಮಾಡುವ ಕಾಲ ಪ್ರತಿವರ್ಷ ಫೆಬ್ರವರಿಯಿಂದ ಪ್ರಾರಂಭವಾಗಿ ಮೇ ತಿಂಗಳು ಬರುವ ಮೊದಲೇ ಮುಕ್ತಾಯವಾಗುತ್ತದೆ. ಪ್ರತಿವರ್ಷದ ಮೂರು ತಿಂಗಳ ಅವಧಿಯಲ್ಲಿ ದೊರೆಯುವ ಮಿಡಿಮಾವನ್ನು ಸಂಗ್ರಹಿಸಲು ಮಲೆನಾಡು ಜನ ನದಿತೊಪ್ಪಲಿನಲ್ಲಿ ತಿರುಗಾಡುತ್ತಾರೆ.ಕೆಲವು ಸಮಯಗಳಲ್ಲಿ ದೊರೆಯುವ ಮಿಡಿಮಾವಿನ ಉಪ್ಪಿನಕಾಯಿ ತಿಂದವರು ಅದನ್ನು ನೆನಪಿಸಿಕೊಂಡರೂ ಬಾಯಲ್ಲಿ ನೀರು ತರಿಸಿಕೊಳ್ಳುತ್ತಾರೆಇದನ್ನರಿತ ರಾಗ್ರಾನುಲ್ಸ್ ಸಂಸ್ಥೆ ಮಲೆನಾಡಿನ ಅಪ್ಪೆಮಿಡಿ ಉಪ್ಪಿನಕಾಯನ್ನು ಮಾರುಕಟ್ಟೆಗೆ ಪರಿಚಯಿಸಿದೆ . ಖರೀದಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://rawgranules.in/pro.../tender-mango-pickle-appe-midi/
0 notes