Tumgik
#rawgranules EatHealthyLiveWealthy healthyproducts naturalproducts brahmi brahmihealthdrink eathealthy healthyfood healthylifestyle eatclean
rawgranules · 2 years
Photo
Tumblr media
ಮಲೆನಾಡಿನ ಪ್ರಸಿದ್ಧ ಮನೆಮದ್ದು ಬ್ರಾಹ್ಮಿ.ತೇವವಿರುವ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುವ ಬ್ರಾಹ್ಮಿ ಅಥವಾ ಒಂದೆಲಗ ಎನ್ನುವ ಗಿಡಕ್ಕೆ ಅದರದ್ದೇ ಆದ ವಿಶೇಷತೆಯಿದೆ. ನಿತ್ಯಸೇವನೆ ಹಾಗೂ ಔಷಧಿ ಸಸ್ಯವಾಗಿ ಬಳಕೆಯಲ್ಲಿರುವ ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಆರೋಗ್ಯದಿಂದ ಹಿಡಿದು, ಚರ್ಮ ಮತ್ತು ಕೂದಲಿನ ಚಿಕಿತ್ಸೆಗೆ ಲಕ್ಷಾಂತರ ಜನರು ಆಯುರ್ವೇದದ ಈ ಮೂಲಿಕೆಯನ್ನೇ ಆಧರಿಸಿದ್ದಾರೆ.
ವಿಶೇಷವಾಗಿ ಕೂದಲಿನ ಬಗ್ಗೆ ಮಾತನಾಡುವುದಾದರೆ, ಕೂದಲು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಬ್ರಾಹ್ಮಿ ಬಹಳ ಪರಿಣಾಮಕಾರಿಯಾಗಿದೆ.
ಕೂದಲು ಉದುರುವಿಕೆ ಕಡಿಮೆ ಮಾಡುವುದು: ಬ್ರಾಹ್ಮಿ ಎಣ್ಣೆಯು ಒಣ ನೆತ್ತಿಗೆ ತೇವಾಂಶವನ್ನು ಒದಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಆಯಂಟಿ ಆಕ್ಸಿಡೆಂಟ್ ಗುಣಗಳು ನೆತ್ತಿಯನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುವುದು ಮಾತ್ರವಲ್ಲದೇ, ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ. ಆದ್ದರಿಂದ ಕೂದಲು ಉದುರುವಿಕೆ ಸಮಸ್ಯೆ ಇರುವವರು, ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಪ್ರಯೋಜನಕಾರಿಯಾಗಲಿದೆ.
ತಲೆಹೊಟ್ಟು ನಿವಾರಣೆ: ಬ್ರಾಹ್ಮಿಯ ಬಳಕೆಯು ತಲೆಹೊಟ್ಟು ಅಥವಾ ಡ್ಯಾಂಡ್ರಫ್ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ತಲೆಹೊಟ್ಟು ಸಮಸ್ಯೆಯು ಸಾಕಷ್ಟು ನಿವಾರಣೆಯಾಗುವುದು.
ಚರ್ಮಕ್ಕೆ ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು: ವಯಸ್ಸಾಗುವ ಚರ್ಮಕ್ಕೆ ಒಂದೆಲಗ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು. ಒಟ್ಟಿನಲ್ಲಿ ಹಲವು ಔಷಧಗಳಿಗೆ ಬಳಕೆಯಾಗುತ್ತಿರುವ‌ ಬ್ರಾಹ್ಮಿ ಎನ್ನುವ ನೈಸರ್ಗಿಕ ಮನೆಮದ್ದನ್ನು, ನಿಯಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳು ದೊರಕುತ್ತದೆ. ಇದನ್ನು ಮನಗಂಡಿರುವ ರಾಗ್ರಾನ್ಯೂಲ್ಸ್ ಸಂಸ್ಥೆ, ಬ್ರಾಹ್ಮಿ ಹೆಲ್ತ್ ಡ್ರಿಂಕ್ಸ್ ಎನ್ನುವ ಹೆಸರಿನಲ್ಲಿ ಬ್ರಾಹ್ಮಿಯ ಉತ್ತಮ ಗುಣಗಳನ್ನು ಸಂಸ್ಕರಿಸಿ ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತಿದೆ. ಯಥೇಚ್ಛವಾಗಿ ಸಿಗದ ಈ ಎಲೆಯನ್ನು ಬಳಸಿ ತಯಾರಿಸಲಾದ ಈ ಹೆಲ್ತ್ ಡ್ರಿಂಕ್ ನ ನಿತ್ಯಸೇವನೆಯಿಂದ ಅನೇಕ ಲಾಭಗಳು ಕಂಡುಬಂದಿವೆ. ಉತ್ಪನ್ನದ ವಿವರಣೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ. www.rawgranules.in
0 notes